"ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೆ" ಇದು ಭಗವದ್ಗೀತೆಯಲ್ಲಿ ಬರುವ ಒಂದು ಶ್ಲೋಕ. ಇದನ್ನು ಶ್ರೀ ಕೃಷ್ಣ ಹೇಳಿದ್ದು. ಅದರರ್ಥ "ಜ್ಞಾನಕ್ಕೆ ಸಮನಾಗಿ ಹಾಗೂ ಅಷ್ಟು ಶುದ್ಧವಾದದ್ದು ಬೇರೇನೂ ಇಲ್ಲ".
ನಿಜ ಜ್ಞಾನ ಅರ್ಥಾತ್ ಅರಿವು ನಮ್ಮನ್ನು ತಿಳುವಳಿಕೆಯುಳ್ಳ ನಿರ್ಧಾರ ತೆಗೆದು ಕೊಳ್ಳಲು ಶಕ್ತಿ ನೀಡುತ್ತೆ. ಅಷ್ಟೇ ಅಲ್ಲ ವಿಮರ್ಶಾತ್ಮಕ ಚಿಂತನೆಗೆ ಕೂಡಾ ಉತ್ತೇಜನೆ ಕೊಡುತ್ತೆ. ಮೋಸಗೊಳ್ಳುವದನ್ನು ತಪ್ಪಿಸುತ್ತೆ.
ಅದೇ ಸಮಯದಲ್ಲಿ ಹೊಸತನ ಮತ್ತು ಪ್ರಗತಿಯ ಮೂಲಕ ಸಮಾಜವನ್ನು ಸಹಾ ಮುನ್ನಡೆಸುತ್ತೆ. ಇದು ನಮ್ಮ ಸ್ವಂತ ಬೆಳವಣಿಗೆ ಮತ್ತು ಸಮಾಜದ ಅಭಿವೃದ್ಧಿಗೆ ಮೂಲಾಧಾರ ಕೂಡಾ.
ಋಗ್ವೇದದಲ್ಲಿ ಒಂದು ಶ್ಲೋಕ ಹೀಗೆ ಆರಂಭ ಆಗುತ್ತೆ. "ಆ ನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ" ಇದರರ್ಥ "ಎಲ್ಲ ಕಡೆಯಿಂದ ಒಳ್ಳೆಯ ವಿಚಾರಗಳು ನಮ್ಮ ಬಳಿ ಬರಲಿ" ಅಂತಾ.
ಖಂಡಿತ, ಉತ್ತಮ ವಿಚಾರಗಳ ಧಾರೆಗೆ, ಮಾಹಿತಿಗೆ ನಿಮ್ಮ ಮನಸ್ಸನ್ನು ಒಡ್ಡಿಕೊಂಡಾಗ ನಿಮ್ಮ ಅಂತಃ ಪ್ರಜ್ಞೆಯ ಚಕ್ಷು ತೆರೆದು ನೀವು ಈ ಪ್ರಪಂಚ ನೋಡುವ ವಿಧಾನ, ನಿಮ್ಮ ನಡುವಳಿಕೆ ಬದಲಾಗುತ್ತದೆ.
ಜ್ಞಾನ ಕನ್ನಡಿಯ ಉದ್ದೇಶ ಕೂಡಾ ಅದೇನೆ. ಎಲ್ಲಾ ಕಡೆಯಿಂದ ಒಳ್ಳೆ ವಿಚಾರ / ವಿಷಯ / ಮಾಹಿತಿ / ಚಿಂತನೆಗಳನ್ನು ಪಡೆದು ನಮ್ಮ ಕನ್ನಡದಲ್ಲಿ ನೀಡುವದು. ನೆನಪಿರಲಿ ಇದು ಸುದ್ದಿ ತಾಣ ಅಲ್ಲ! ಒಂದು ವಿಶಿಷ್ಟ ರೀತಿಯ ಬ್ಲಾಗ್!!
ಒಳ್ಳೆ ವಿಚಾರಗಳು, ಮಾಹಿತಿ, ಚಿಂತನೆ ನಮ್ಮ ಚೈತನ್ಯವನ್ನು ಹೆಚ್ಚಿಸಿ ಈ ಜೀವನವನ್ನು ಹೆಚ್ಚು ಸಂಭ್ರಮಿಸುವಂತೆ ಮಾಡುತ್ತದೆ. ಉಪಯುಕ್ತ ಮಾಹಿತಿಗಳು ಹಲವು ಕಡೆ ಬಳಕೆ ಸಹ ಆಗುತ್ತದೆ. ಅದೇ ಜ್ಞಾನ ಕನ್ನಡಿಯ ಗುರಿ ಕೂಡಾ.
(ಜಾಗತಿಕ / ದೇಶ / ಕರ್ನಾಟಕ) ಮಟ್ಟದ ಉಪಯುಕ್ತ ಮಾಹಿತಿ, ಚಿಂತನೆ ಸರಳ ಕನ್ನಡದಲ್ಲಿ ನೀಡುವದೇ ಈ ಜ್ಞಾನ ಕನ್ನಡಿ ತಾಣದ ಗುರಿ.
ಈ ವಿವೇಕದ ಭಂಡಾರವನ್ನು ನಿಮ್ಮ ನೆಂಟರು, ಮಿತ್ರರೊಂದಿಗೆ ಕೂಡಾ ಹಂಚಿ, ಸುಜ್ಞಾನ ಪ್ರಸಾರಕ್ಕೆ ನಾಂದಿ ಹಾಡಿರಿ. ಓಕೆನಾ?
ಜ್ಞಾನ ಕನ್ನಡಿಯ ಪ್ರತಿ ಪದ, ಪ್ರತಿ ಪುಟ ತಿಳುವಳಿಕೆಯ ಮಿಡಿತಕ್ಕೆ ಪ್ರಾಮಾಣಿಕವಾಗಿ ಹಾತೊರೆಯಲಿವೆ. ಅದರ ಬಗ್ಗೆ ಯಾವುದೇ ಸಂಶಯ ಬೇಡ.
ಜ್ಞಾನ ಕನ್ನಡಿಯಲ್ಲಿ ನಿಮ್ಮ ಹಿನ್ನೆಲೆ ಏನೇ ಇರಲಿ ಈ ಕಲ್ಪನಾ ನಗರಿಯಲ್ಲಿ ಹೆಕ್ಕಿಕೊಳ್ಳಲು ವಿವಿಧ ರೀತಿಯ ಜ್ಞಾನದ ಮರದ ಹಣ್ಣುಗಳಿವೆ. ನಿಮಗಿಷ್ಟದ ಕ್ಷೇತ್ರದ ಹಣ್ಣಿನ ರಸ ಹೀರಿ ತಿಂದು ಕೃತಾರ್ಥರಾಗಿ!
ಜ್ಞಾನದ ದೇವತೆಯಾದ ಸರಸ್ವತಿಯನ್ನು ಸ್ಮರಿಸಿ ನಮ್ಮನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆಗೆ ಒಯ್ಯುವಂತೆ ಕೋರಿ ಕೊಳ್ಳೋಣ.
ಮುಖ್ಯ ವಿಭಾಗಗಳು
- ಭಾಷೆ
- ಗಣಿತ
- ವಿಜ್ಞಾನ
- ಸಮಾಜ
- ಕಲೆ ಮತ್ತು ಕ್ರಿಯಾಶೀಲತೆ
- ಆರೋಗ್ಯ
- ತಂತ್ರಜ್ಞಾನ
- ಪರಿಸರ
- ಸಂಸ್ಕೃತಿ
ನಿಮ್ಮ ಸಲಹೆ, ಟೀಕೆ, ಅನಿಸಿಕೆಗೆ ನಮ್ಮ ಕಮೆಂಟ್ ಬಾಕ್ಸ್ ಯಾವಾಗಲೂ ತೆರೆದಿದೆ. ನಿಮ್ಮ ಆಶೀರ್ವಾದ ಹಾಗೂ ಬೆಂಬಲ ಜ್ಞಾನ ಕನ್ನಡಿಯ ಮೇಲಿರಲಿ. ಆಯ್ತಾ? ಗೊತ್ತಿಲ್ಲದೇ ಎಲ್ಲೇ ತಪ್ಪಾದರೂ ತಿಳಿಸಿ ಸರಿಪಡಿಸೋಣ.
ನೆನಪಿಡಿ ಜ್ಞಾನ ಕನ್ನಡಿ ಬ್ಲಾಗ್ ಮಸ್ತಕಮಣಿ.ಕಾಂ ವೆಬ್ ತಾಣದ ಮಣಿಗಳಲ್ಲಿ ಒಂದಾಗಿದೆ. ಉಳಿದ ಮಣಿಗಳನ್ನು ನೋಡಲು ಮಸ್ತಕಮಣಿ.ಕಾಂ ತಪ್ಪದೇ ಭೇಟಿ ನೀಡಿ.
ಇಂತಿ ನಿಮ್ಮ
--ಜ್ಞಾನ ಕನ್ನಡಿ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ