ಒಂದು ವಸ್ತುವಿನ ರಾಶಿಯ ಪ್ರಮಾಣವನ್ನು ಹಲವು ರೀತಿಯಲ್ಲಿ ಭಾಗವಾಗಿ ವಿಭಾಗಿಸಬಹುದು.
ಅರ್ಧ ಭಾಗ
ಒಂದು ವಸ್ತುವನ್ನು ಎರಡು ಸಮ ಭಾಗ ಮಾಡಿದರೆ ಎರಡು ಅರ್ಧ ಭಾಗ ಆಗುತ್ತದೆ.
ಅರ್ಧ ಭಾಗ ಎಂದರೆ ಎರಡನೇಯ ಒಂದು ಭಾಗ. ಅಂದರೆ 1/2 ಅಥವಾ 50% ಪಾಲು ಆಗುತ್ತದೆ.
ಕಾಲು ಭಾಗ
ಒಂದು ವಸ್ತುವನ್ನು ನಾಲ್ಕು ಸಮ ಭಾಗ ಮಾಡಿದರೆ ನಾಲ್ಕು ಕಾಲು ಭಾಗ ಆಗುತ್ತದೆ.
ಕಾಲು ಭಾಗ ಎಂದರೆ ನಾಲ್ಕನೇಯ ಒಂದು ಭಾಗ. ಅಂದರೆ 1/4 ಅಥವಾ 25% ಪಾಲು ಆಗುತ್ತದೆ.
ಮುಕ್ಕಾಲು ಭಾಗ
ಒಂದು ವಸ್ತುವಿನಿಂದ ಕಾಲು ಭಾಗ ತೆಗೆದರೆ ಮುಕ್ಕಾಲು ಭಾಗ ಉಳಿಯುತ್ತದೆ.
ಮುಕ್ಕಾಲು ಭಾಗ ಎಂದರೆ ನಾಲ್ಕನೇಯ ಮೂರು ಭಾಗ. ಅಂದರೆ 3/4 ಅಥವಾ 75% ಪಾಲು ಆಗುತ್ತದೆ.
ಕಾಲು, ಅರ್ಧ, ಮುಕ್ಕಾಲು
ಕಾಲು ಭಾಗ - 1/4
ಅರ್ಧ ಭಾಗ - 2/4 = 1/2
ಮುಕ್ಕಾಲು ಭಾಗ - 3/4
ಪೂರ್ಣ ಭಾಗ - 4/4 = 1
ಮೇಲೆ ಒಂದು ಆಯತಾಕಾರದ ಭಾಗ ಮಾಡುವದನ್ನು ನೋಡಿದಿರಿ. ಈಗ ವೃತ್ತವನ್ನು ಅಂದರೆ ಸರ್ಕಲ್ ಭಾಗ ಮಾಡಿ ನೋಡೋಣ.
ವೃತ್ತದ ಭಾಗ
ಉದಾಹರಣೆಗೆ ಅಮ್ಮ ದೋಸೆಗಳನ್ನು ಮನೆಯವರಿಗೆಲ್ಲ ಬಡಿಸುತ್ತಿದ್ದಾಳೆ.
ಒಬ್ಬ ಕಾಲು, ಇನ್ನೊಬ್ಬ ಅರ್ಧ, ಮತ್ತೊಬ್ಬ ಮುಕ್ಕಾಲು ಮತ್ತು ಪೂರ್ತಿ ದೋಸೆ ಕೇಳಿದರೆ ಈ ಮೇಲಿರುವ ಹಾಗೆ ಭಾಗ ಮಾಡಿ ಕೊಡಬೇಕು. ಗುಲಾಬಿ ಬಣ್ಣ ದೋಸೆ ಚೂರು ಎಂದು ಭಾವಿಸಿ.
ಈಗ ಗೊತ್ತಾಯ್ತಲ್ಲ ಕಾಲು, ಅರ್ಧ, ಮುಕ್ಕಾಲು, ಪೂರ್ಣ ಭಾಗ ಎಂದರೆ?
ಈ ಲೇಖನ ಜುಲೈ ೧೭ ೨೦೧೮ ರಲ್ಲಿ ಬಾಲವಿಸ್ಮಯ ಬ್ಲಾಗ್ ಅಲ್ಲೀ ರಾಜೇಶ ಹೆಗಡೆ ಅವರಿಂದ ಪ್ರಕಟ ಆಗಿತ್ತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ