ನನ್ನ ಎರಡನೆಯ ಮಗನಿಗೆ ಕನ್ನಡ ಸ್ವರ ಪರಿಚಯ ಮಾಡಲು ನಾನು ಕಟ್ಟಿದ ಹಾಡು. ಚಿಕ್ಕವನಿದ್ದಾಗ ಈ ಹಾಡನ್ನು ಖುಷಿಯಿಂದ ಹಾಡುತ್ತಿದ್ದ. ಇಲ್ಲಿ ಹಾಗೆ ಸುಮ್ಮನೆ!
ಅ ಅ ಅನ್ನ... ಸಾಂಬಾರ್ ಬೇಕೆ ಇನ್ನಆ ಆ ಆನೆ... ಕೊಡ್ಲಾ ಬಾಳೆ ಕೊನೆ
ಇ ಇ ಇರುವೆ... ಸಕ್ಕರೆ ಬೆಲ್ಲ ಕೊಡುವೆ
ಈ ಈ ಈಶ... ನಮಿಸುವೆನು ದಿವಸ
ಉ ಉ ಉರಗ... ಕಚ್ಚ ಬೇಡ್ವೋ ನನಗ
ಊ ಊ ಊಟ... ಆದ ಮೇಲೆ ಪಾಠ
ಋ ಋ ಋಷಿ... ತಪಸ್ಸಿನಲ್ಲೇ ಖುಷಿ
ಎ ಎ ಎಮ್ಮೆ... ಕೊಡುವೆಯಾ ಹಾಲು ಒಮ್ಮೆ
ಏ ಏ ಏಣಿ... ಹತ್ತಲಾ ನಿನ್ನ ಏಣಿ
ಐ ಐ ಐದು... ಕೈಲಿ ಬೆರಳು ಐದು
ಒ ಒ ಒಂಟೆ... ನಿನಗೂ ಬಾಯಾರಿಕೆ ಉಂಟೆ?
ಓ ಓ ಓದು... ಪುಸ್ತಕಾನಾ ಓದು
ಔ ಔ ಔಷದಿ... ಜ್ವರ ಬಂದಾಗ ಬೇಕ್ರಿ
ಅಂ ಅಂ ಅಂಗಡಿ... ಚಾಕ್ಲೇಟ್ ತಂದು ತಿಂತೀನಿ
ಅಃ ಅಃ ಅಃ... ನಿಂಗೂ ಬೇಕಾ ಚಹಾ!
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ